ಶುಕ್ರವಾರ, ಮೇ 10, 2013


ಬೀchi ಯವರ ಕನ್ನಡ ಎಮ್ಮೆ  ಶುಂಟಿ ಚೂರುಗಳು. ಪ್ರ: ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ -೧
ಫೋ: ೨೭೯೧೬೧೬        
ಈ ಚೂರುಗಳ ರುಚಿ ನೋಡಿದ ನಂತರ ಇಡೀ ಕನ್ನಡ ಎಮ್ಮೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
  • ಈಗ ಸ್ಥೂಲ ಅಧ್ಯಕ್ಷರ ಪರಿಚಯ ಅಲ್ಲಲ್ಲ, ಅಧ್ಯಕ್ಷರ ಸ್ಥೂಲ ಪರಿಚಯ ಮಾಡಿಕೊಡುವ ಹೊಣೆ, ಅಥವಾ ಹೊರೆ ಅನ್ನಿ, ಅಥವಾ ಕೆಲಸ, ಕಾರ್ಯ ಏನಾದರೂ ಅನ್ನಿ, ಈ ಸುಡುಗಾಡು ಜವಾಬ್ದಾರಿ ನನ್ನ ಮೇಲೆ ಬಿದ್ದಿದೆ. 
  • ಪೊಲೀಸರು ನಮ್ಮಿಬ್ಬರ ಮೇಲೆ ಕೇಸು ಮಾಡಿದರು; ಆಗ ನಾವಿಬ್ಬರೂ ತಲೆ ಮರೆಸಿ, ವೇಷ ಬದಲಾಯಿಸಿಕೊಂಡು ಹೊರಟೆವು. ಈ ಅಧ್ಯಕ್ಷರು ಹೆಣ್ಣಾದರು; ನಾನು ಇವರ ಗಂಡನಾಗಿ ಇಬ್ಬರೂ ಹತ್ತಿಯ ಹೊಲದಲ್ಲಿ ದುಡಿಯಲು ಕೂಲಿ ಹೊದೆವು. ಇಲ್ಲಿ ಒಂದು ಮಾತನ್ನು ಹೇಳದಿದ್ದರೆ ನನ್ನಿಂದ ಕರ್ತವ್ಯಲೋಪ ಅಗುತ್ತದೆ. ಅದೇನೆಂದರೆ ಇದು ಪೋಲೀಸರ ಕಣ್ಣು ತಪ್ಪಿಸಲಿಕ್ಕಾಗಿಯೇ, ಇವರು ಹೆಣ್ಣು ವೇಷ ಮಾಡಿಕೊಂಡರು. ನಿಜ, ಆದರೆ ಇವರ ದುರ್ದೈವದಿಂದ ಇವರು ಹೆಣ್ಣಾದುದಕ್ಕೇ ಪೊಲೀಸರು ಇವರಿಗೆ ಗಂಟುಬಿದ್ದರು. ಆ ಕತೆ ಎಲ್ಲ ಬೇರೆ, ಈಗದು ಬೇಡ. 
  • ನಮ್ಮ ಅಧ್ಯಕ್ಷ ಮಹಾಶಯರಿಗೆ ಮೊದಲಿನಿಂದಲೂ ಕೂಲಿಕಾರರೆಂದರೆ ಬಹಳ ಪ್ರೀತಿ. ಕೂಲಿಕಾರರನ್ನು ಬಿಟ್ಟು ಅರೆಗಳಿಗೆಯೂ ಇರಲಾರರು. ಯಾಕೆಂದರೆ ಇವರು ಕಂಟ್ರಾಕ್ಟರು.  
ಈಗ ನನ್ನ ಮುಕ್ತಕ 
ಬೊಗಳೆ 
"ನನ್ನ ತಾತನ ಶಾಲು ಇಲ್ಲಿಂದ ಡೆಲ್ಲಿಯ 
ವರೆಗೆ ಹಾಸಲು ಸಾಕಾದೀತು"
"ಅಷ್ಟೇನಾ? ಹಾಗಿದ್ದರದು ನನ್ನ ತಾತನ 
ಶಾಲಿನ ತೂತು ಮುಚ್ಚೀತು"!
                                                        * * * * * * * * * * * * 

    ಮಂಗಳವಾರ, ಏಪ್ರಿಲ್ 30, 2013


    ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
    ಫೋ: ೨೩೬೭೬೭೬         Email: sahithyaprakashana@yahoo.co.in
    ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
    • ಊರು ಚಿಕ್ಕದಿದ್ದಷ್ಟೂ ಊರಲ್ಲಿ ದೊಡ್ಡ ಮನುಷ್ಯರು ಹೆಚ್ಚು. 
              ನಾಟಕದಲ್ಲಿ ಹೆಂಣು ಚೆನ್ನಾಗಿದ್ದಷ್ಟೂ ಊರಲ್ಲಿ ಕಲಾಭಿಮಾನಿಗಳೂ ಹೆಚ್ಚು. ಕರೆಯಿಸಿಕೊಂಡು ಬಂದವರು ಕೆಲವರು, ಅವರಿವರಿಂದ ಹೇಳಿಸಿ ಕರೆಯಿಸಿಕೊಂಡು ಬಂದವರು ಹಲವರು, ತಾವೇ ಕೇಳಿಕೊಂಡು ಬಂದ ಕಂಪಲ್ಸರಿ ಕಾಂಪ್ಲಿಮೆಂಟರಿ ವಾಲಂಟರಿ ಕಲಾಭಿಮಾನಿಗಳಂತೂ ಸರೇ  ಸರೆ 
    ಇವರೆಲ್ಲರೂ ಕಲಾಭಿಮಾನಿಗಳೇ. ಬಂಗಾರಿಯ ದುಂಡು ಮುಖವೇ ಕಲೆ!

    ಮುಕ್ತಕ 

    ಸ್ವಕೀಯ-ಪರಕೀಯ 
    ನಿನ್ನವರಾದರು ಖಳರ ಸಂಗವು ಬೇಡ 
    ಸುಜನರು ಪರರಾದರೇನು?
    ನಿನ್ನೊಳೆ ಜನಿಸಿದ ರೋಗವ ಕಳೆಯದೆ 
    ಕಾಡಿನ ಮೂಲಿಕೆ ತಾನು!
                                                **********
    ಮುಂದಿನ ಪುಸ್ತಕ: ಕನ್ನಡ ಎಮ್ಮೆ. 

      ಸೋಮವಾರ, ಏಪ್ರಿಲ್ 22, 2013


      ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
      ಫೋ: ೨೩೬೭೬೭೬         Email: sahithyaprakashana@yahoo.co.in
      ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
      • "ಜಲದ ಮೇಲ್ ತೇಲುವ ನೆಲದ ಬಸಿರಿನ ನೀರು ಥಕಥಕನೆ ಕುದಿದುರಿದು, ಗಿಡಮರ, ಪರ್ವತ ಗಿರಿಂಗಳು ಸರಭರನೆ ಮುರಿದುರುಲಿ, ಧಡಂ ಧಡಂ ಎಂದು ಬಿದ್ದೆದ್ದು ಪುಡಿಪುಡಿಯಾಗಿ, ಹುಡಿಹುಡಿಯಾಗಿ, ಮೀನು ಮತ್ಸ್ಯಂಗಳು      ಉಷ್ಣೋದಕದ ಭೀತಿಯಿಂ ಭಯಪಟ್ಟು ಕಂಗಾಲಾಗಿ ಕಾತರಮಾಗೀ"                                                                       ಒಂದು ಸಲ ಉಸಿರೆಳೆದುಕೊಂಡು, ಹೀರೋ ಮುಂದುವರಿಸಿದ ಅಸಂಪೂರ್ಣವಾಗಿದ್ದ ಆ ಮೊತ್ತಮೊದಲ ವಾಕ್ಯವನ್ನು.                                                                  "ತಿಮಿಂಗಿಲಗಳು ಬಾಯಿಂದ ನೊರೆಯುಗುಳಿ  ದಿಗ್ಭ್ರಾಂತವಾಗಿವಾಗಿ ಮರ, ವೃಕ್ಷಂಗಳಂ ಏರಿ ಕುಳಿತಾಗ, ಕಾಡು ಕಾನನ ಅಟವಿಯೋಳ್ ಗಿರಿ ಗಹ್ವರಗಳೋಳ್ ಪವಡಿಸಿರುವ ಗಂಧಸಿಂಧೂರ, ಪುಲಿ, ಸಿಂಹ, ಸಿಂಹಿಣಿ, ಕೇಸರಿಗಳ ಕನಸಂ ಕೆಟ್ಟು, ಅಡಬರಿಸಿ ಅಂ ಎಂದು ಊರಗಲ ಮಾರಗಲ ಬಾಯ್ತೆರೆ ತೆರೆದು, ಆನೆ, ಗಜಾದಿಂಗಳು ಸೊಂಡಿಲಿ ಗಿಂಡಿ ಲಿಯಂ ಮೇಲೆತ್ತಿ, ಮುಗಿಲಾಕಾಶ, ಗಗನ, ಚಂದ್ರ ಸೂರ್ಯ ನಕ್ಷತ್ರ ಮಂಡಲಕ್ಕೆತ್ತಿ ಕಿರ್ ರ್ ರ್ ಎಂದು ಕಿರಲಿ, ಭರ್ ರ್ ರ್  ಎಂದು ಭೋರ್ಗರೆದು ಭೂ ನೆಲಕ್ಕೆ ಅಪ್ಪಳಿಸೆ ಭೂಮಾತೆ ನೆಲತಾಯಿ ಪೃಥ್ವಿಯೊಡತಿ ಹೊಟ್ಟೆ ಸೀಳಿ ಹೋ  ಎಂದಳುತಳುತ ಕಂಣೀರು ಕಂಬನಿ ಸುರಿಸುರಿಸಿ, ಫಲಕುಸುಮದ ಭಾರದಿಂದ ಬಗ್ಗಿದ ತರುಷಂಡಂಗಳು ತತ್ತರಿಸಿ,ಶುಕ ಪಿಕ ಶಾರಿಕಾದಿ  ವಿಹಂಗಳು ಶೋಕಿಸಿ, ಲತಾ ಬಳ್ಳಿಗಳು ಭಸ್ಮೀಭೂತಮಾಗಿ ಬೂದಿಯಾಗಿ, ಶಿವನ ಮಸ್ತಕದೋಳ್ ರಾರಾಜಿಸುವ ಲಲಾಟ ಭಸ್ಮಮಾಗೀ."
      ಈಗ ನನ್ನ ಮುಕ್ತಕ. 
      ಓದಿದ್ದು 
      " ಆ ಮನೆ ಹುಡುಗಿಯು  ಫಸ್ಟ್ ಕ್ಲಾಸು ಬಂದಳು 
      ನೋಡಿ ಕಲಿಯಬೇಕು ನೀನು"
      "ಹಾಗೆಯೆ  ಮಾಡಿಯೆ  ಅವಳನ್ನೆ ನೋಡಿಯೆ 
      ಫೇಲಾದೆನಲ್ಲಮ್ಮ ನಾನು"!  
       

      ಗುರುವಾರ, ಏಪ್ರಿಲ್ 11, 2013

      ವಿಜಯ ಸಂವತ್ಸರದ ಯುಗಾದಿ.
      ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
      ಫೋ: ೨೩೬೭೬೭೬         Email: sahithyaprakashana@yahoo.co.in
      ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.

      • ಸಾಕ್ಷಾತ್ ಕಲೆಯೇ ಆಗಿದ್ದ ಬಂಗಾರಿ ಕಲೋಪಾಸಕರ, ಕಲಾಪೋಷಕರ ಉದರಾಶ್ರಯ, ಪೋಷಣೆ, ಪ್ರೋತ್ಸಾಹಗಳಿಂದ ಪಾಪದ ಮುದ್ರೆಯನ್ನು ಪಡೆದು, ಜಗತ್ತಿಗೆ ತೋರಿಸಲು ಕೈಯಲ್ಲಿ ಹಿಡಿದು ನಿಂತಿದ್ದಾಳೆ ವಂಚನೆಯ ಕುರುಹಾದ ಹೆಂಣು ಮಗುವೊಂದನ್ನು!          
               ಅದಾರೋ ಗದರಿಕೊಂಡರು. 
               "ಕೇಳಿಸಲಿಲ್ಲವೇನೇ ಆಗಲೆ ಹೇಳಿದುದು? ಮುಂದೆ ಹೋಗು."
               ಇನ್ನೂ ಎಷ್ಟು ಮುಂದು ಹೋಗಬೇಕು ಬಂಗಾರಿ!
               ಕಾಂಪ್ಲಿಮೆಂಟರಿ ಪಾಸು ಪಡೆದ ಗಂಡಂದಿರೊಂದಿಗೆ ಬಂದು ನಾಟಕಗಳನ್ನು ನೋಡಿದ್ದ ಗರತಿ ಗೌರಮ್ಮಗಳು ಈ ಪಾಪಿ ಬಂಗಾರಿಯನ್ನು                  ಗುರುತಿಸಿ ತಂತಮ್ಮಲ್ಲಿಯೆ ಏನೇನೋ ಮಾತನಾಡಿಕೊಂಡರು. ಕಡೆಗೊಬ್ಬ ಮಹಾಸತಿ ಅಂದೂಬಿಟ್ಟರು.
       "ಇಂತಹ ಮುಂಡೆಯರಿಂದ ಮನೆಗಳೇ ಹಾಳಾಗುತ್ತವೆ. ಇವಳಿಗೆ ಭಿಕ್ಷೆ ಹಾಕುವುದೂ  ಮಹಾಪಾಪ!"
              ಇದು ಸತ್ಪಾತ್ರ ದಾನವಲ್ಲವೆ?
              ಬಂಗಾರಿಯದು ಈಗ ಸತ್ತ ಪಾತ್ರ. ಚಂಚಲಾಕ್ಷಿಯ ಅಕ್ಷಿಯಿಂದ ಚಂಚಲತೆ ಮಾಯವಾಗಿದ್ದಿತು. 
              ಮುರಿದ ಬೊಂಬೆ ಯಾವ ಮಗುವಿಗೂ ಬೇಡ!

      ಈಗ ನನ್ನ ಮುಕ್ತಕ. 

        ಡಾಕ್ಟರ್ ಶಾಪಿನಲ್ಲಿ.... 
        "ಈ ಔಷಧಿಯನೊಂದುಬಾಟಲಿ ಕುಡಿದರೆ
        ಮತ್ತೆ ಬರಬೇಕಿಲ್ಲವಲ್ಲ?"
        "ಹಾಗೆಂದೆ ಕಾಣುತ್ತೆ, ಇದನೊಯ್ದ ಜನರಲಿ
        ಒಬ್ಬರೂ ತಿರುಗಿ ಬಂದಿಲ್ಲ."!

        ಶುಕ್ರವಾರ, ಮಾರ್ಚ್ 22, 2013


        ಬೀchi ಯವರ ಬಂಗಾರದ ಕತ್ತೆ ಯ ಶುಂಟಿ ಚೂರುಗಳು. ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-೫೮೦೦೨೦
        ಫೋ: ೨೩೬೭೬೭೬         Email: sahithyaprakashana@yahoo.co.in
        ಈ ಚೂರುಗಳ ರುಚಿ ನೋಡಿದ ನಂತರ ಇಡೀ ಬಂಗಾರದ ಕತ್ತೆ ಯನ್ನು ನೋಡಿ->ಬೀchi ಯವರ ಇತರ ಪುಸ್ತಕಗಳನ್ನು ಓದಿ->ಕನ್ನಡದ  ಇತರ ಪುಸ್ತಕಗಳನ್ನು ಓದಿ. ಮನೆಗೆ ಒಂದಾದರೂ ಕನ್ನಡ ಪತ್ರಿಕೆಯನ್ನು ತರಿಸಿ.
        • ಶ್ರೀರಾಮಚಂದ್ರನ ಪಟ್ಟಾಭಿಷೇಕಕ್ಕೆ ಮುಹೂರ್ತವನ್ನಿಟ್ಟುಕೊಟ್ಟರು ವಶಿಷ್ಠ ಮಹರ್ಷಿಗಳು. ಅದೇ ಶುಭ ಮುಹೂರ್ತಕ್ಕೆ ಸರಿಯಾಗಿ ಶ್ರೀರಾಮ ಅರಣ್ಯವಾಸಕ್ಕಾಗಿ ಅಯೋಧ್ಯೆಯಿಂದ ಹೊರ ಹೊರಟ, ಸೀತಾ ಲಕ್ಷ್ಮಣ ಸಮೇತನಾಗಿ. 
        • ಇಬ್ಬರು ಮಹಾನುಭಾವರ ಮಿಳನ ಎಂದೂ ವ್ಯರ್ಥವಾದುದಿಲ್ಲ ಮಾನವ ಚರಿತ್ರೆಯಲ್ಲಿ. 
        • ಮಕ್ಕಳಾಗಲಿಲ್ಲ ಎಂದಾವ ಹೆಂಣೂ ಬಾವಿಯಲ್ಲಿ ಹಾರಿಕೊಳ್ಳುವುದಿಲ್ಲ. ಇಂದಲ್ಲ, ಇನ್ನು ಮುಂದಾದರೂ ಆದಾವು ಎಂದು  ಮೊದಲ ಕೆಲವು ವರ್ಷಗಳನ್ನು ಆಶೆಯಲ್ಲಿ ಕಳೆಯುತ್ತದೆ. ಆಮೇಲೆ ಇದ್ದೇ ಇವೆ ನೂರೆಂಟು ದೇವರುಗಳು. ಕಲ್ಲು, ಗುಂಡುಗಳ ಪೂಜೆ, ಜೋಡಿ ಮರಗಳನ್ನು ಸುತ್ತುವುದು, ದಾನ ಧರ್ಮವೆಂದು ಮನೆಯಲ್ಲಿದ್ದುದನ್ನಿಷ್ಟು ಅವರಿವರಿಗೆ ಕೊಟ್ಟು ಹಾಳು ಮಾಡುವುದು. ಸೋತೆ ಎಂದು ದೇವನೂ ಕೈ ಎತ್ತಿದ ಮೇಲೆ ಮನುಷ್ಯ ಪ್ರಯತ್ನ-ಲೇಡಿ ಡಾಕ್ಟರ ಬಳಿ ಲೇವಡಿ!
        • ನಾಟಕ ಕಂಪನಿಯ ಸರ್ವೀಸು, ಕಾಫಿ ಹೋಟೆಲ್ ಸರ್ವೀಸು, ಕಾಮಿನಿಯರ ಸರ್ವೀಸು, ಇವೆಲ್ಲವೂ ಹೋಲ್ ಇಂಡಿಯಾ ಸರ್ವೀಸ್ ಗಳು.                                                                                                                           ಒಂದೇ ಊರು, ಒಂದೇ ಸ್ಥಾನ ಎಂಬ ಹುಚ್ಚು ಇಲ್ಲ ಇವರಿಗೆ. ಇಂದು ಇಲ್ಲಿ, ನಾಳೆ ಇನ್ನೆಲ್ಲಿಯೋ! ಬಂಗಾರುಪೇಟೆ ರೈಲ್ವೇ ಸ್ಟೇಷನ್ ಹೋಟೆಲಲ್ಲಿ ಕಪ್ಪು ತೊಳೆಯುವ ಹುಡುಗ ನಾಲ್ಕೇ ದಿನಗಳಲ್ಲಿ ಬೊಂಬಾಯಿಯಲ್ಲಿ ಗಲ್ಲಿಯ ಪೂರಿ, ಭಾಜಿ ದುಕಾಣ್ ಒಂದರಲ್ಲಿ ಎಂಜಲ ಎಲೆ ತೆಗೆಯುತ್ತಿರುತ್ತಾನೆ. ಬೆಂಗಳೂರಿನ ಪೈಪ್ ಲೈನ್ ನಲ್ಲಿ ಸಾಧಾರಣ `ಪ್ರಾಕ್ಟೀಸ್' ಇರುವ ಬಡ ಸೌಂದರ್ಯ ಜೀವಿಯೊಬ್ಬಳು ರೇಸ್ ಸೀಜನ್ ನಲ್ಲಿ ಮದರಾಸಿನ ಹೈಕ್ಲಾಸ್ ಹೋಟೆಲಲ್ಲಿ ತೇಲಬಹುದು. ಇಂದು ಶಿವಕುಮಾರ ಸಾಮ್ರಾಜ್ಯ ಸಂಗೀತ ನಾಟಕ ಕಂಪನಿಯಲ್ಲಿ ಸೇವಕ-ನಾಳೆಯೇ ಗೋಕರ್ಣದ ಶಾಸ್ತ್ರೀ ಕಲಾಮಂಡಲಿಯಲ್ಲಿ ಅಶ್ವತ್ಥಾಮ. ಪಾಕಿಸ್ತಾನದಲ್ಲಿ ಕನ್ನಡ ಕಬೀರ್ ಹಾಕಿದರೆ ಅಲ್ಲಿಗೂ ರೆಡಿ!
        • "ನಾನಯ್ಯಾ, ನಾನು. ಈ ಕಂಪನಿಯನ್ನು ಕಟ್ಟಿ ನಿಲ್ಲಿಸಿ ಈ ಸ್ಥಿತಿಗೆ ತಂದವನು ಯಾವ ಸೂಳೇಮಗ ಗೊತ್ತೇ? ನಾನು. .."
        ಈಗ ನನ್ನ ಮುಕ್ತಕ:

        ಸತ್ಯವ್ರತ!
        "ಸತ್ಯವೆಂಬುದು ಬಹು ಬೆಲೆಯುಳ್ಳದ್ದೆನ್ನುತ 
        ತಿಳಿದಿರುವವನಯ್ಯ ನಾನು."
        "ಇರಬೇಕು, ಅದಕಾಗಿ ಜತನದಿ ಬಳಸುವೆ 
        ಅಪರೂಪಕೊಮ್ಮೊಮ್ಮೆ ಅದನು!"
                                                                * * * * * * * * * * * *